ದುರ್ಗಾ ಗ್ರಾಮವು ಕಾರ್ಕಳದಿಂದ ಸ್ವಲ್ಪ ದೂರದಲ್ಲಿರುವ ಗುಡ್ಡಗಾಡು ಪ್ರದೇಶವಾಗಿದೆ. ದುರ್ಗಾ ಎಂಬ ಹೆಸರು ಸಂಸ್ಕೃತದಲ್ಲಿ ದುರ್ಗಮಾ ಎಂಬ ಪದದಿಂದ ಹುಟ್ಟಿಕೊಂಡಿದೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಮರಗಳಿಂದ ಕೂಡಿದೆ. ದುರ್ಗಾ ಜಲಪಾತ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದು ವಾಸ್ತವವಾಗಿ ಜಲಪಾತವಲ್ಲ. ಆದರೆ ಆ ಬಂಡೆಗಳ ಮೇಲೆ ನೀರು ಬಲದಿಂದ ಉಕ್ಕಿ ಹರಿಯುವುದರಿಂದ ಇದನ್ನು ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತವು ನೀರು ತಡೆಯುವ ಬಂಡೆಗಳ ಮೂಲಕ ಸಾಗಿದಂತೆ, ಅದು ಹಿಮಭರಿತ ಬಿಳಿ ವರ್ಣಮಯವಾಗಿ ಕಾಣುತ್ತದೆ. ವಾಹನಗಳು ಇಲ್ಲದ ದಿನಗಳಲ್ಲಿ, ಈ ಗ್ರಾಮವು ಸಂಪೂರ್ಣವಾಗಿ ದೂರದ ವಾಸಸ್ಥಾನವಾಗಿತ್ತು. ಆದರೆ ಇವಾಗ ಈ ಸ್ಥಳದಲ್ಲಿ ರಸ್ತೆ ಇರುವುದರಿಂದ ವಾಹನದಲ್ಲಿ ಕುಳಿತು ಜಲಪಾತದ ಸೌಂದರ್ಯವನ್ನು ಆನಂದಿಸಬಹುದು. == ವಿಶೇಷತೆ == ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಸ್ವರ್ಣಾ ನದಿಯ ಹಾದಿಯಲ್ಲಿರುವ ದುರ್ಗಾ ಜಲಪಾತವು ಹಳ್ಳಿಗೆ ಪ್ರಕೃತಿ ಪ್ರಿಯರನ್ನು ಆಕರ್ಷಿಸುವ ಒಂದು ತಾಣವಾಗಿದೆ. ಸ್ವರ್ಣಾ ನದಿಯು ವಿಶಾಲವಾದ ಒರಟಾದ ಬಂಡೆಯ ವಿಸ್ತಾರದ ಮೂಲಕ ಹರಿಯುತ್ತದೆ, ಮಾನ್ಸೂನ್ ಮತ್ತು ಕೆಲವು ತಿಂಗಳುಗಳಲ್ಲಿ ಈ ದೃಶ್ಯವು ಆನಂದವನ್ನು ನೀಡುತ್ತದೆ. ಎತ್ತರದ ಬಂಡೆಗಳ ಮೇಲೆ ಕುಳಿತುಕೊಂಡು ಅಲ್ಲಿನ ಹಾಗೂ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯವನ್ನು ಆನಂದಿಸಬಹುದು. == ಮಾರ್ಗಸೂಚಿ == ಈ ಜಲಪಾತವು ಕಾರ್ಕಳದಿಂದ ಐದು ಕಿಲೋಮೀಟರ್ ಹಾಗೂ ಉಡುಪಿಯಿಂದ ೪೪.೮ ಕಿಲೋಮೀಟರ್ ದೂರದಲ್ಲಿದ್ದು ಮಳೆಗಾಲದಲ್ಲಿ ಸಂಜೆ ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳವಾಗಿದೆ. == ಸಹ ನೋಡಿ == ಗೊಮ್ಮಟೇಶ್ವರ ಪ್ರತಿಮೆ, ಕಾರ್ಕಳ ಶ್ರೀ ಚತುರ್ಮುಖ ಜೈನ ಬಸದಿ ಅತ್ತೂರು ಚರ್ಚ್ == ಉಲ್ಲೇಖಗಳು ==